English Sentence formation explained in Kannada
ಆತ್ಮೀಯ ವಿದ್ಯಾರ್ಥಿಗಳೇ, ಇವತ್ತು ಇಂಗ್ಲೀಷ್ ನಲ್ಲಿ ವಾಕ್ಯ ರಚನೆ (sentence formation) ಬಗ್ಗೆ ನಾವು ತಿಳಿದುಕೊಳ್ಳೋಣ. ಸರಳವಾಗಿ ವಾಕ್ಯ ಮಾಡಬಹುದು. ಇದಕ್ಕೆ ಕರ್ತೃ, ಕರ್ಮ ಎರಡಂತೂ ಇರಬೇಕು. ಉದಾ: I ate. ನಾನು ತಿಂದೆ. ಇಲ್ಲಿ I ಎನ್ನುವುದು ಕರ್ತ. ate ಎನ್ನುವುದು ಕರ್ಮ. ಆದರೆ ಸಾಮಾನ್ಯವಾಗಿ ವಾಕ್ಯಗಳು ಇನ್ನೂ ವಿವರವಾಗಿ ಇರುತ್ತವೆ. I ate Idlies. ನಾನು ಇಡ್ಲಿಗಳನ್ನು ತಿಂದೆ. ಇಲ್ಲಿ Idlies ಎಂಬುದನ್ನು object ಎಂದು ಕರೆಯುತ್ತಾರೆ. ಯಾವ ಪದದ ಮೇಲೆ ಕರ್ಮವು ಫಲ ಕೊಡುವುದೋ, ಪ್ರಭಾವ ಬೀರುವುದೋ ಅದು object. ಇನ್ನೂ ವಿವರವಾಗಿ ವಾಕ್ಯವನ್ನು ರಚಿಸಿದರೆ... I ate Idlies for breakfast. ನಾನು ತಿಂಡಿಗೆ ಇಡ್ಲಿಗಳನ್ನು ತಿಂದೆ. I ate Rice Idlies for breakfast. ನಾನು ತಿಂಡಿಗೆ ಅಕ್ಕಿ ಇಡ್ಲಿಗಳನ್ನು ತಿಂದೆ. ಈ ರೀತಿ ನಾವು ಮೊದಲು ಸರಳ ವಾಕ್ಯ ರಚಿಸಿ ನಂತರ ಅದಕ್ಕೆ ವಿವರಗಳನ್ನು ಯುಕ್ತ ಜಾಗದಲ್ಲಿ ಸೇರಿಸಬಹುದು. ಧನ್ಯವಾದಗಳು ಅಶೋಕ್