ಇವತ್ತು ನಾವು imperative sentences ( ಇಂಪರೇಟಿವ್ ವಾಕ್ಯಗಳು ) ಬಗ್ಗೆ ತಿಳಿದುಕೊಳ್ಳೋಣ .      ನಾವು  ಯಾರಿಗಾದರೂ ಆಜ್ಞೆ ಮಾಡಬೇಕೆಂದಾಗ ; ಮನವಿ ಮಾಡುವಾಗ ; ಯಾರಿಗಾದರೂ ಸೂಚನೆ - ಸಲಹೆಗಳನ್ನು ನೀಡಬೇಕೆಂದಾಗ - ಇಂಪರೇಟಿವ್ ವಾಕ್ಯಗಳನ್ನು ಬಳಸಬೇಕು .      ಉದಾ :  You turn on the UPS when the current goes.  ವಿದ್ಯುತ್ ಹೋದಾಗ ನೀನು ಯುಪಿಎಸ್ ಅನ್ನು ಚಾಲನೆಗೊಳಿಸು . ( ಸೂಚನೆ )      Please wash the plate after you eat.   ತಿಂದಾದ ಮೇಲೆ ದಯವಿಟ್ಟು ತಟ್ಟೆಯನ್ನು ತೊಳೆಯಿರಿ . ( ಮನವಿ )         You must go to play only after finishing your supper.   ನೀನು ಊಟವನ್ನು ಮುಗಿಸಿಯೇ ಆಟವಾಡಲು ಹೋಗಬೇಕು . ( ಆಜ್ಞೆ )      Once we cross the age of 50, it is a good idea to get a full body check-up once every 6 months.    50 ವರ್ಷ ದಾಟಿದ ಮೇಲೆ , ಆರು ತಿಂಗಳಿಗೊಮ್ಮೆ ಸಂಪೂರ್ಣ ದೇಹದ ತಪಾಸಣೆ ಮಾಡಿಸಿಕೊಳ್ಳುವುದು ಒಳ್ಳೆಯದು . ( ಸಲಹೆ )     Thanks & Regards,  Ashok